Wednesday, January 13, 2010

ಬೆಳ್ಳ೦ ಬೆಳಗ್ಗೆಯ ಮೌನಾಚರಣೆ!!

ಹಲೊ, ನಾನು ಗುರುದತ್ತ. ಸಧ್ಯಕ್ಕೆ ದಕ್ಷಿಣ ಕೊರಿಯಾದಲ್ಲಿ ಜೀವನ ಸಾಗಿಸ್ತಾ ಇದಿನಿ. ಎಲ್.ಜಿ. ಕಂಪನಿ ಕೆಲಸದ ಮೇರೆಗೆ 3 ತಿಂಗಳಿಗೆ ದಕ್ಷಿಣ ಕೊರಿಯಾಗೆ ಫುಟ್ ಬಾಲ್ ಥರ ಒದ್ದು ಕಳಸಿದ್ದಾರೆ.
   
ಆಫೀಸ್ ಬಸ್ ಸಮಯ 7.39ಕ್ಕೆ. ಆದ್ರೆ 7.35ಕ್ಕೆ ಬಸ್ ಬಂದು ನಮಿಗೆ ಕಾಯ್ತಾ ಇರತ್ತೆ. ನಾವು ಭಾರತೀಯರಾಗಿರೋದ್ರಿ೦ದ ಸರಿಯಾದ ಸಮಯ ಪಾಲನೆ ಮಡಿದ್ರೆ ಏನ್ ಚೆನ್ನಾಗಿರತ್ತೆ ನೀವೇ ಹೇಳಿ? ಭಯ೦ಕರ ಛಳಿ . ಹ೦ಗು ಹಿ೦ಗು ಓಡ್ ಬ೦ದು ಬಸ್ ಹತ್ತಿ ಕೂತ್ರೆ ಎಲ್ಲ ನಿದ್ದೆ ಹೊಡಿತ ಇರ್ತಾರೆ.  ಆಫೀಸ್ ಬೆಳಗ್ಗೆ 8 ಗ೦ಟೆಗೆ ಶುರು. ಇಲ್ಲಿ ಸೂರ್ಯೊದಯ ಸಮಯ ಕೂಡ 8 ಗಂಟೆಗೆ . ಮತ್ತೆ ರಾತ್ರಿ 8 ಗ೦ಟೆವರೆಗೂ ಇಲ್ಲೇ ಇರಬೇಕು. ಸರಿ ಬಂದು ತೂಕಡಿಸ್ತಾ ಕೂತಿರ್ತಿನಿ, ಈ ಚಳಿಗೆ ಮೂಗಿಂದ ಬೇರೆ ಇಳೀತಾ ಇರತ್ತೆ. 

8.20ಕ್ಕೆ ಸರಿಯಾಗಿ ಬಾಡಿ ಸ್ಟ್ರೆಚ್ಚಿಂಗ್ ಸಮಯ. ಅದು ಆದ್ಮೇಲೆ ಶುರು ನಮ್ಮ ಮೌನಾಚರಣೆ ಸೆಶನ್. ಕೊರಿಯಾದಲ್ಲಿ ಇಂಗ್ಲೀಷ್ ಬಗ್ಗೆ ಇತ್ತೀಚೆಗಷ್ಟೆ ಅರಿವು ಮೂಡ್ತಾ ಇದೆ. ಕರ್ನಾಟಕದಲ್ಲಿ ಇಂಗ್ಲೀಷ್ ಮೀಡಿಯಮ್ ಭರಾಟೆ ಶುರು ಆದ್ಮೇಲೆ, ಇಂಗ್ಲೀಷ್ ಪದಗಳನ್ನ ಕನ್ನಡಕ್ಕೆ ಸೇರಿಸಿ ಕನ್ನಡವನ್ನ ಕೊಲ್ಲಕ್ಕೆ ಶುರುಮಾಡಿದಿವಿ.ಆದರೆ ಇಲ್ಲಿ ಕೊರಿಯನ್ ಭಾಷೆ ಪ್ರಭಾವ ಯಾವ ಮಟ್ಟಕ್ಕೆ ಇದೆ ಅಂದ್ರೆ, ಇವರು ಇಂಗ್ಲೀಷ್ ಮಾತಾಡುವಾಗ ಇಂಗ್ಲೀಷ್ನೇ ಕೊಲ್ತಾ ಇದಾರೆ. ಅದಕ್ಕೆ ಇವರು ಮತಾಡೊ ಇಂಗ್ಲೀಷ್ ಅನ್ನ "ಕೊಂಗ್ಲೀಷ್" (ಕೊರಿಯನ್ ಭಾಷೆಯಿಂದ ಅಮಾನುಷವಾಗಿ ಕೊಲ್ಲಲ್ಪಟ್ಟಿರೊ ಇಂಗ್ಲೀಷ್) ಅನ್ನಬಹುದು ಅಲ್ವೆ? ಬಹುಶಃ ಇಲ್ಲಿ ರವಿ ಬೆಳಗೆರೆ ಇದ್ದಿದ್ರೆ "ಕ್ರೈಂ ಸ್ಟೋರಿ"ಯಲ್ಲಿ 1 ತಿಂಗಳು ಯಾರು ಯಾರು ಯಾವ ರೀತಿ ಇಂಗ್ಲೀಷ್ ಕೊಲೆ ಮಡ್ತಾರೆ ಅನ್ನೋದನ್ನೇ ತೊರಿಸ್ತಾ ಇದ್ರು ಅನ್ಸುತ್ತೆ.

ಸರಿ, ಈಗ ಮತ್ತೆ ವಿಶಯಕ್ಕೆ ಬರ್ತಿನಿ. ಕೊರಿಯಾ ಸಾಪ್ಟ್‌ವೇರ್ ಇಂಜಿನಿಯರ್ಸ್ ಇಂಗ್ಲೀಷ್ ಕಲಿಬೇಕು ಅಂತ ದಿನಾಗ್ಲು ಮಾರ್ನಿಂಗ್ ಟೀಮ್ ಮೀಟಿಂಗ್ ಇರತ್ತೆ. ಅದರಲ್ಲಿ ಒಬ್ರು 2 ನಿಮಿಷದ ಇಂಗ್ಲೀಷ್ ಭಾಷಣ ಸರದಿಯಂತೆ ಮತಾಡ್ಬೇಕು. ಇನ್ನೊಬ್ರು 2 ನಿಮಿಷದ ಸಣ್ಣ ಕಥೆಯನ್ನ ಸರದಿಯಂತೆ ಹೇಳಬೇಕು. ಸಣ್ಣ ಕಥೆ ಇಂಗ್ಲೀಷ್ ಅಥವಾ ಕೊರಿಯನ್ ಭಾಷೆಯಲ್ಲಿ ಹೇಳಬಹುದು.

ನನಗೆ ಆಟಗಳಲ್ಲಿ ತುಂಬ ಆಸಕ್ತಿ.ಆದ್ದರಿಂದ ಯಾವುದಾದರು ಆಟದ ವಿಷಯವನ್ನು ಆರಿಸವುದಾಗಿ ಮೊದಲೇ ನಿರ್ಧರಿಸಿದ್ದೆ.ನನ್ನ ಸರದಿ ಸನಿಹವಾದಾಗ, ನಾನು ಬಹಳ ಯೋಚಿಸಿ ಇಡೀ ವಿಷ್ವಕ್ಕೇ ಭಾರತದ ಕೊಡಿಗೆಯಾದ ಅತ್ಯಂತ ಬುದ್ಧಿವಂತರ ಆಟ "ಚಸ್" ಆರಿಸಿಕೊಂಡೆ. "ಚಸ್" ಬಗ್ಗೆ ಮಾಹಿತಿ ಸಂಗ್ರಹಿಸಿ ತಯಾರಾದೆ.

ಈ ದಿನ ನನ್ನ ಸರದಿ. ನಾನು ಬಹಳ ಉತ್ಸಾಹದಿಂದ ನನ್ನ ಭಾಷಣ ಶುರು ಮಡಿದೆ. ನಿರರ್ಗಳವಾಗಿ ಮಾತಾಡತೊಡಗಿದೆ. ನಾನು ಮಾತಾಡುವಾಗ ಬೇರೆಯವರು ಎಸ್ಟು ಆಸಕ್ತಿ ತೋರಿಸ್ತಾ ಇದಾರೆ ಅಂತ ತಿಳೀಬೇಕು ಅನ್ನಿಸ್ತು. ಭಾಷಣದ ಮದ್ಯ ತಲೆ ಎತ್ತಿ ನೊಡ್ತಿನೀ, ಹಲವರು ಭಾರತದ ಪ್ರಧಾನ ಮಂತ್ರಿ ಮನಮೊಹನ್ ಸಿಂಗ್ ಸಾವಿಗೆ ಸಂತಾಪ ಸೂಚಿಸೊ ಥರ ಮೌನಾಚರಣೆ ನಡಿಸ್ತಾ ಇದಾರೆ. ಕೆಲವರು "ನನ್ ಮಗನೆ ಇಸ್ಟೊಂದ್ ತಲೆ ತಿಂತಾ ಇದಿಯಾ..ಆಮೆಲೆ ಸಿಗು ನೊಡ್ಕೋತಿನಿ" ಅನ್ನೋ ಹಂಗೆ ನನ್ನನ್ನೇ ಕಣ್ಣು ಬಾಯಿ ಬಿಟ್ಕೊಂದು ಗುರಾಯಿಸ್ತಾ ಇದಾರೆ. ಒಂದು ಕ್ಷಣಕ್ಕೆ ನನಿಗೆ ಎನ್ ಮಾಡಬೇಕು ಅನ್ನೋದು ತೋಚದೆ, ಹಂಗು ಹಿಂಗು ಭಾಷಣ ಮುಗಿಸಿದೆ.

ಅದ್ರೆ ನನ್ನಲ್ಲಿ ಪ್ರತೀಕಾರದ ಬೆಂಕಿ ಇನ್ನು ಉರಿತಾ ಇತ್ತು. ನನ್ನ ಭಾಷಣ ಮುಗಿದ ಮೇಲೆ, ಇನ್ನೊಬ್ಬ ಕೊರಿಯನ್ 2 ನಿಮಿಷದ ಸಣ್ಣ ಕಥೆಯನ್ನು ಕೊರಿಯನ್ ಭಾಷೆಯಲ್ಲಿ ಶುರು ಮಡಿದ. ನನಗೂ ಎನೂ ಅರ್ಥ ಆಗ್ಲಿಲ್ಲ. ಅದಕ್ಕೆ ಇನ್ನೂ ಬದುಕಿರುವ ಕೊರಿಯನ್ ಪ್ರಧಾನ ಮಂತ್ರಿ ಸಾವಿಗೆ ಸಂತಾಪ ಸೂಚಿಸೊ ತರ ಮೌನಾಚರಣೆ ಮಾಡಿ ನನ್ನ ಪ್ರತೀಕಾರ ತೀರಿಸಿಕೊಂಡೆ.

ಇಷ್ಟೆಲ್ಲಾ ಆದಮೇಲೆ ಮನಸ್ಸಿನಲ್ಲಿ ನನ್ನ ಹುಡುಕಾಟ ಶುರು ಆಯಿತು. ದುಃಖ ಹಂಚಿಕೊಂಡಷ್ಟೂ ಕಡಿಮೆ ಆಗುತ್ತೆ. ಸಂತೂಷ ಹಂಚಿಕೊಂಡಷ್ಟೂ ಜಾಸ್ತಿ ಆಗುತ್ತೆ. ಅದೇ ಮೌನ ಹಂಚಿಕೊಂಡರೆ...?

8 comments:

  1. Gurunath... Good one in first try... I know best is yet to come... Keeep up the work.. This is best way to come out of boredoom.But still..."Manmohan Singh na Kolbardhithuuu"

    ReplyDelete
  2. hay datta....

    chennagi baredidhiya...... good...keep it up....next update ge kaaytirtini.....

    ReplyDelete
  3. Good one.. keep it up.. :)

    ReplyDelete
  4. ಮೌನ ಹಂಚಿಕೊಂಡರೆ, ಮಾತನ್ನು ಹೊರತುಪಡಿಸಿ ಬೇರೆಲ್ಲಾ communication ಶುರುವಾಗುತ್ತೆ.
    - ಅರಸು

    ReplyDelete
  5. next time, ninna bhashanadalli swalpa kannaDada serisu... like 'dabba nan makla... porki fellows anta... Madhu

    ReplyDelete
  6. ಚೆನ್ನಾಗಿದೆ ಕಣೋ

    ಓಳ್ಳೇ ಪ್ರಯತ್ನ ಮುಂದುವರಿಸು ಬೀಡಬೆಡ

    ReplyDelete
  7. Dear Datta, ninna chikkappa kano. I have read your article. Good. Keep it up. But it is to be polished. you can do it by practice only. As one has rightly said, "naavu bareyuva utsahadalli badukiroranna sattavarante kalpane madi bareyabaradu. Intha sookshmagalanna neenu gamanisalebeku. Adbitre bere ella ok. So keep writing. All the best.

    ReplyDelete
  8. tumba chennagi barediddiya... heege barita iru...:)

    ReplyDelete